30 Matching Annotations
  1. Feb 2019
    1. ಹಾಲೆಂಜಲು ಪೆ[ಯ್ಯ]ನ, ಉದಕವೆಂಜಲು ಮತ್ಸ್ಯದ,ಪುಷ್ಪವೆಂಜಲು ತುಂಬಿಯ,ಎಂತು ಪೂಜಿಸುವೆ ಶಿವಶಿವಾ, ಎಂತು ಪೂಜಿಸುವೆಈ ಎಂಜಲನತಿಗಳೆವಡೆ ಎನ್ನಳವಲ್ಲ.ಬಂದುದ ಕೈಕೋ ಕೂಡಲಸಂಗಮದೇವಾ.

      The calf’s leftover, The milk The fish’s leftover, The water The bee’s leftover The flower How can I worship? O Shiva! Shiva! How can O worship? To get over Leftovers! Is beyond me Take whatever comes O Kudalasangama Deva —Basavanna

      Source

    1. ಮುನಿದೆಯಾದಡೆ ಒಮ್ಮೆ ಜರೆದಡೆ ಸಾಲದೆಅಕಟಕಟಾ, ಮದನಂಗೆ ಮಾರುಗೊಡುವರೆಹಗೆಗೆ ಮಾರುಗೊಟ್ಟು ನಿನ್ನವರನೊಪ್ಪಿಸುವರೆಕೂಡಲಸಂಗಮದೇವಾ

      When angry, Isn’t it enough to jeer at me once? I Alas! Is it right To hand me over to love-god How can you hand over Your people By yielding to your foe? O Lord Kudalasangama -Basavanna

      Source

    1. ಹಂದಿಯೂ ಮದಕರಿಯೂ ಒಂದೇ ದಾರಿಯಲ್ಲಿ ಸಂಧಿಸಿದಡೆ ಹಂದಿಗಂಜಿ ಮದಕರಿ ಕೆಲಕ್ಕೆ ಸಾರಿದಡೆ ಈ ಹಂದಿಯದು ಕೇಸರಿಯಪ್ಪುದೆ ಚೆನ್ನಮಲ್ಲಿಕಾರ್ಜುನಾ ?

      When a pig and and an inebriated elephant Meet on the same road If the the elephant moves aside Will the pig become a lion? O Channamallikarjuna

      -Akkamahadevi

      Source

    1. ಅಮೃತಕ್ಕೆ ಹಸಿವುಂಟೆ ? ಜಲಕ್ಕೆ ತೃಷೆಯುಂಟೆ ?ಮಹಾಜ್ಞಾನಸ್ವರೂಪಂಗೆ ವಿಷಯವುಂಟೆ ?ಸದ್ಗುರುಕಾರುಣ್ಯವ ಪಡೆದು ಲಿಂಗಾರ್ಚನೆಯಂ ಮಾಡುವಮಹಾಭಕ್ತಂಗೆ ಬೇರೆ ಮುಕ್ತಿಯ ಬಯಕೆ ಉಂಟೆ ?ಅವರುಗಳಿಗೆ ಅದು ಸ್ವಯಂಭು ಸಹಜಸ್ವಭಾವ.ಇನ್ನು ತೃಪ್ತಿ ಅಪ್ಯಾಯನ ಅರಸಲುಂಟೆ ?ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ.

      Is the drink of immortals hungry? Is water thirsty? Does Ultimate Knowledge embodied Have lust? The great Bhakta On whom the true guru has bestowed Compassion and performs Linga worship: Dis he have any other desire For liberation? For such ones It is born of itself and their nature Why search for for source of contentment? O Vishweswara dear to Urilingapeddi

      Source

    1. ಸಿಡಿಲುಹೊಯ್ದ ಬಾವಿಗೆ ಸೋಪಾನವುಂಟೆ ? ಷಡುವರ್ಣರಹಿತಂಗೆ ಬಣ್ಣವುಂಟೆ ? ಕಡಲದಾಂಟಿದವಂಗೆ ಹರುಗೋಲುಂಟೆ ? ಬಿಡದೆ ಕಟ್ಟಿದ ಒರೆಗೆ ಸಂಧಾನವುಂಟೆ ? ಒಡಲಿಲ್ಲದವಂಗೆ ಒಡವೆಯುಂಟೆ ? ನುಡಿಯುಂಟೆ ಎಮ್ಮ ಅಜಗಣ್ಣದೇವಂಗೆ ?

      Does the thunder-hit well have any steps? Does someone rid of six hues have any color? Does someone ,after crossing the sea, have any boat? Does the scabbard put away have any use? Does someone without the body have any ornament? Does our Ajagannadeva have any language?

      -Muktayakka

      Source

    1. ಅಂಜಿದಡೆ ಮಾಣದು, ಅಳುಕಿದಡೆ ಮಾಣದು,ವಜ್ರಪಂಜರದೊಳಗಿದ್ದಡೆ ಮಾಣದು, ತಪ್ಪದುವೋ ಲಲಾಟಲಿಖಿತ.ಕಕ್ಕುಲತೆಗೆ ಬಂದಡೆ ಆಗದು ನೋಡಾ.ಧೃತಿಗೆಟ್ಟು, ಮನ ಧಾತುಗೆಟ್ಟಡೆ ಅಪ್ಪುದು ತಪ್ಪದು,ಕೂಡಲಸಂಗಮದೇವಾ.

      If you get afraid It will not leave you If you falter It will not leave you If you are in a diamond cage It will not leave you You cannot prevent What is inscribed on your forehead Look! All your likes and wants Do not work Even if the mind loses firmness And its sap, What should happen Is unavoidable O Lord Kudalasangama -Basavanna

      Source: HS Shiva Prakash

    1. ಹಗಲು ನಾಲ್ಕು ಜಾವ ಅಶನಕ್ಕೆ ಕುದಿವರು.ಇರುಳು ನಾಲ್ಕು ಜಾವ ವ್ಯಸನಕ್ಕೆ ಕುದಿವರು.ಕಂಡವರ ಕಂಡು ಮಂಡೆಯ ಬೋಳಿಸಿಕೊಂಬುವರು.ಉಂಬುವರ ಕಂಡು ಉಂಬುವರು.ಪುಣ್ಯಕ್ಷೇತ್ರ ಪುರುಷಕ್ಷೇತ್ರ,ಅಷ್ಟವಿಧಾರ್ಚನೆ ಷೋಡಶೋಪಚಾರವೆಂಬುದಲ್ಲದೆತಮ್ಮ ನಿಧಾನವ ಸಾಧಿಸುವ ಭೇದವನರಿಯದೆಷಡುಸ್ಥಲಜ್ಞಾನಿಗಳೆಲ್ಲಾ ಸತ್ತರಲ್ಲಾ ಗುಹೇಶ್ವರಾ.

      During four quarters of the day They fret and fume for food During four quarters of the night They fret and fume for misery When they see others shave off their heads They shave off their heads When they see others eating They eat Talking about places of pilgrimage Eight and sixteen types of worship Unable to puzzle out How to find their own treasure The experts of six-phased system Perished O Goggeshwara

      Source: HS Shiva prakash

    1. ಅಯ್ಯಾ ನೀನೆನಗೆ ಗುರುವಪ್ಪಡೆ, ನಾ ನಿನಗೆಶಿಷ್ಯನಪ್ಪಡೆ,ಎನ್ನ ಕರಣಾದಿ ಗುಣಂಗಳ ಕಳೆದು,ಎನ್ನ ಕಾಯದ ಕರ್ಮವ ತೊಡೆದು,ಎನ್ನ ಪ್ರಾಣನ ಧರ್ಮವ ನಿಲಿಸಿ,ನೀನೆನ್ನ ಕಾಯದಲಡಗಿ, ನೀನೆನ್ನ ಪ್ರಾಣದಲಡಗಿನೀನೆನ್ನ ಭಾವದಲಡಗಿ, ನೀನೆನ್ನ ಕರಸ್ಥಲಕ್ಕೆಬಂದುಕಾರುಣ್ಯವ ಮಾಡಾ ಗುಹೇಶ್ವರಾ

      O master, if you are my guru And I, your desciple Rid me of the qualities of my senses Remove the karma of my body Eliminate the ways of my prana Stop the ways of my prana Hide in my body Hide in my prana Hide in my imagination Come on to my palm Bestow compassion on me Goggeshwara

      -Allamaprabhu

      Source: HS Shiva Prakash

    1. ಹಾಲು ತುಪ್ಪವ ನುಂಗಿ ಬೇರಾಗಬಲ್ಲುದೆ ? ಸೂರ್ಯಕಾಂತದ ಅಗ್ನಿಯನಾರು ಭೇದಿಸಬಲ್ಲರು ? ಅಪಾರಮಹಿಮ ಚೆನ್ನಮಲ್ಲಿಕಾರ್ಜುನಾ, ನೀನೆನ್ನೊಳಡಗಿಪ್ಪ ಪರಿಯ ಬೇರಿಲ್ಲದೆ ಕಂಡು ಕಣ್ದೆರೆದೆನು.

      After swallowing the ghee Can milk be apart from it? Who can separate the sunstone From its fire? O Channamallikarjuna Of numberless glories I saw How you are hidden in me Without being apart And opened My Eyes -Akkamahadevi

      Source: HS Shiva Prakash

    1. ಈಶಲಾಂಛನವ ತೊಟ್ಟು ಮನ್ಮಥವೇಷಲಾಂಛನವ ತೊಡಲೇತಕ್ಕೆ ?ಇದು ನಿಮ್ಮ ನುಡಿ ನಡೆಗೆ ನಾಚಿಕೆಯಲ್ಲವೆ ?ಅಂದಳ ಛತ್ರ, ಆಭರಣ, ಕರಿತುರಗಂಗಳ ಗೊಂದಣವೇತಕ್ಕೆ ?ಅದು ಘನಲಿಂಗದ ಮೆಚ್ಚಲ್ಲ, ಎಂದನಂಬಿಗ ಚೌಡಯ್ಯ

      After wearing the mark of the lord Why wear that of love-god? Isn’t this a shame On your words and deeds?

      Wagons, parasols, ornaments Horses and elephants -Why all this mess?

      It is not pleasing To Linga, the Absolute

      Says Chowdayya, the Boatman

      Chowdayya the Boatman

      Source: HS Shiva prakash

    1. ಎಣ್ಣೆಯಿದ್ದು ಎಳ್ಳು ನನೆಯದ ಭೇದವಕಿಚ್ಚಿದ್ದು ಕಲ್ಲು ಸಿಡಿಯದೆ ಭೇದವಕಾಮವಿದ್ದು ಕನ್ನೆಯನನುಭವಿಸದ ಭೇದವಪರವಿದ್ದು ಪ್ರಾಣನ ಪ್ರಕೃತಿಯ ಹರಿಯದ ಭೇದವನರರೆತ್ತ ಬಲ್ಲರೈ? ರಾಮನಾಥ.

      The secret of sesame seed Not drenching in spite of Having oil; Of stone not exploding in spite of Having heat; Of not enjoying the virgin In spite of having lust; Of not cutting off breath and nature In spite of being beyond How can mortals understand this? O Ramanatha -Dasimayya the Weaver

      Source: HS Shiva prakash

    1. ಕೂಟದಿಂದ ಕೂಸು ಹುಟ್ಟುವಡೆಬ್ರಹ್ಮನ ಆಟಕೋಟಲೆಯೇಕೆ ?ಸ್ಥಿತಿ ಆಟದಿಂದ ನಡೆವಡೆವಿಷ್ಣುವಿನ ಭೂತಹಿತವೇಕಯ್ಯಾ ?ಘಾತಕದಿಂದ ಕೊಲುವಡೆರುದ್ರನ ಆಸುರವೇತಕ್ಕೆ ?ಇಂತಿವೆಲ್ಲವೂ ಜಾತಿಯುಕ್ತವಲ್ಲದೆತಾ ಮಾಡುವ ನೀತಿಯುಕ್ತವಲ್ಲ.ಇದಕಿನ್ನಾವುದು ಗುಣ ?ಭೇದಿಸಾ, ಗೂಡಿನ ಗುಮ್ಮಟನೊಡೆಯ ಅಗಮ್ಯೇಶ್ವರಲಿಂಗ.

      If the baby is born of sexual union Why Brahma’s boast? If existence is all play Why Vishnu’s kindness to beings? If killing is though treachery Why Rudra’s monstrous cruelty? Because all these are birth-dependant They are not made of our deeds Where is virtue in this? Penetrate this secret Agamyeshwara, Lord of Gummata -Manu Muni Gummatadeva

      Source: HS Shiva Kumar

    1. ಸರ್ವಾಂಗಲಿಂಗವಾದ ಶರಣನ ಕಾಯಆವ ದೇಶದಲ್ಲಿ ಆಳಿದಡೇನು?ಎಲ್ಲಿ ಆಳಿದಡೇನುರಿ ಉಳಿದಡೇನು?ಕಾಯ ಉಳಿಯದೆ ಬಯಲಾದಡೇನು?ಅದೇತರಲ್ಲಿ ಹೋದಡು ಲಿಂಗೈಕ್ಯಪದಕ್ಕೆ[ಕುತ್ತ] ಕೊಡಲಿಲ್ಲವೆಂದನಂಬಿಗ ಚೌಡಯ್ಯ.

      When every body part Of sharana becomes Linga What if his body falls In which place? What if it stays or falls? What if it did not stay And turns into void? Wherever he goes There is no glitch For his identity with Linga -Chowdayya the Ferryman

      Source: HS Shiva Kumar

    1. ಪರಮಪದವಿಯ ನಿಮ್ಮ ಕೊರಳಲ್ಲಿ ಕಟ್ಟಿಕೊಳ್ಳಿ.ಪರಮಪದವಿಯ ನಿಮ್ಮ ಎದೆಯಲ್ಲಿ ಇರಿದುಕೊಳ್ಳಿ.ಎನಗೆ ನಿಮ್ಮ ತೊತ್ತು ಸೇವೆಯೆ ಸಾಕು, ಮಹಾಲಿಂಗ ಕಲ್ಲೇಶ್ವರಾ.

      Wear the highest honour round your neck Keep the highest honour in your heart I am content with the service of being your slave O Mahalinga Kalleshwara

      -Havinhala Kallayya

      Source: HS Shiva Kumar

    1. ಕಂಥೆ ತೊಟ್ಟವ ಗುರುವಲ್ಲ,ಕಾವಿ ಹೊತ್ತವ ಜಂಗಮವಲ್ಲ,ಶೀಲ ಕಟ್ಟಿದವ ಶಿವಭಕ್ತನಲ್ಲ,ನೀರು ತೀರ್ಥವಲ್ಲ,ಕೂಳು ಪ್ರಸಾದವಲ್ಲ.ಹೌದೆಂಬವನ ಬಾಯ ಮೇಲೆಅರ್ಧಮಣದ ಪಾದರಕ್ಷೆಯ ತೆಗೆದುಕೊಂಡುಮಾಸಿ ಕಡಿಮೆಯಿಲ್ಲದೆ ತೂಗಿ ತೂಗಿ ಟೊಕಟೊಕನೆ ಹೊಡೆ ಎಂದಾತ ನಮ್ಮ ಅಂಬಿಗರಚೌಡಯ್ಯ.

      Whoever just wears a sack Is no guru Whoever just carries a saffron garb Is no jangama Whoever is just tied down to virtue Is no devotee of Shiva Just water and food Are no sacred offerings If anyone says Yes- Pick up a sandal weighing half a mana Swing it And hit him non-stop,

      Says Chowdayya the Ferryman

      Source: HS Shiva Kumar

    1. ಕಾಯಕರ್ಮವ ಅನುಭವಿಸುತ್ತ ಮತ್ತೆ , ದಿವ್ಯಜ್ಞಾನದ ಮಾತದೇತಕ್ಕೆ ?ವಾಗ್ವಾದಕ್ಕೂ ದಿವ್ಯಜ್ಞಾನಕ್ಕೂ ಅನುಪಾನಉಂಟೆ ?ರಸವಾದದ ಬೇರ ಕದ್ದ ಚೋರನಂತೆ,ಅದರ ಭೇದವನರಿಯ, ಅದ ವೇಧಿಸಿ ಕಾಣ.ಕಳಂಕ ಹೋದ ಹೊಲಬನರಿಯ, ಆ ಚೋರನ ಮಾತ ವೇದಿಗಳೊಪ್ಪುವರೆ ?ಇಂತಿ ಭೇದವ ತಿಳಿದು, ಷಡುಸ್ಥಲವೇದಿಗಳಾಗಬೇಕು.ಮರುಳಶಂಕರಪ್ರಿಯ ಸಿದ್ಧರಾಮೇಶ್ವರಲಿಂಗವ,ಅರಿವಿನಲ್ಲಿ ವೇಧಿಸಿಕೊಳ್ಳಬೇಕು.

      While experiencing body’s karmas Why talk of the sacred wisdom? Has logic anything to do with sacred wisdom? The speech of a thief who has stolen The alchemical root Unable to penetrate its mysteries: Will the wise accept his word? Understand its mysteries Become wise in the six-phased path Realise Sidhdharama Dear to Marulasidhdha In awareness

      Source: HS Shiva Kumar

    1. ಅಂಕ ಕಳನೇರಿ ಕೈಮರೆದಿರ್ದಡೆಮಾರಂಕ ಬಂದಿರಿವುದ ಮಾಬನೆನಿಮ್ಮ ನೆನಹ ಮನ ಮರೆದಿರ್ದಡೆಮಾಯೆ ತನುವನಂಡಲೆವುದ ಮಾಬುದೆಕೂಡಲಸಂಗಯ್ಯನ ನೆನೆದಡೆ,ಪಾಪ ಉರಿಗೊಡ್ಡಿದರಗಿನಂತೆ ಕರಗುವುದಯ್ಯಾ.

      When the soldier in the battle Is careless with the hand Won’t the enemy soldier Come to stave him? If one is careless about The mind remembering you Will maya forget to eat up the body? Remember Father Kudalasanga, O friend, Your sins will melt like sealing wax -Basavanna

      Source: HS Shiva Kumar

    1. ಕಾಯವೆಂಬ ಕಲ್ಪಿತವ ಕಳೆದು, ಪ್ರಾಣವೆಂಬ ಸೂತಕವ ಹರಿದು,ನಿಜಭಕ್ತಿ ಸಾಧ್ಯವಾದಲ್ಲದೆ ಲಿಂಗಪರಿಣಾಮವನೆಯ್ದಿಸಬಾರದು (ವೇಧಿಸಬಾರದು?)ಅನು ಮಾಡಿದೆ, ನೀವು ಕೈಕೊಳ್ಳಿ ಎಂದಡೆ ಅದೇ ಅಜಾÕನ.ನಮ್ಮ ಗುಹೇಶ್ವರಲಿಂಗಕ್ಕೆ ಕುರುಹಳಿದು ನಿಜ ಉಳಿದವಂಗಲ್ಲದೆಪದಾರ್ಥವ ನೀಡಬಾರದು ಕಾಣಾ ಸಂಗನಬಸವಣ್ಣಾ.

      After getting rid of the fantasy of the body After tearing up the contamination of life-breath Unless true devotion becomes possible You cannnot bring anyone to the bliss of Linga If someone says: ‘ I have made it, and You can take it’- That is ignorance O Sangana Basavanna No offering to anyone Unless he has not destroyed all traces For Goggeshwara Linga Retaining only the truth of the self -Allamaprabhu

      Source: HS Shiva Kumar

    1. ವಿಷಯದ ಪಿತ್ತ ತಲೆಗೇರಿದಲ್ಲಿವಿವೇಕವೆಂಬ ದೃಷ್ಟಿ ನಷ್ಟವಾಗಿಪಶುಪತಿಯ ನೆನಹುಗೆಟ್ಟು ಮತಿಮಂದನಾದಲ್ಲಿಮಂತ್ರ ನೆನಹುಂಟೆ! ಹೇಳ! ರಾಮನಾಥ.

      When the madness of lust Goes to the head The vision of discrimination Is lost The memory of Pashupati Disappears When the mind grows Dull Can one remember the mantra? Tell me, O Ramanatha -Dasimimayya the Weaver

      Source: HS Shiva Kumar

    1. ಕಾಯದಿಂದ ಸತ್ಕ್ರೀಯ ಕಂಡೆ.ಸತ್ಕ್ರೀಯಿಂದ ಸದ್ಭಾವವ ಕಂಡೆ.ಸದ್ಭಾವದಿಂದ ನಿಮ್ಮ ನಿಜಮೂರ್ತ್ಲಿಯ ಕಂಡೆ.ನಿಮ್ಮ ನಿಜಮೂರ್ತಿಯಿಂದಸ್ವಾನುಭಾವವಳವಟ್ಟುದ ಕಂಡೆನಯ್ಯಾ.ಸ್ವಾನುಭಾವಜ್ಞಾನದಿಂದ ಅಂಗಕರಣೇಂದ್ರಿಯಸೂತಕಪಾತಕಕ್ಕೆ ಹೊರಗಾದೆನಯ್ಯಾ ಕದಂಬಲಿಂಗವೆ,ನೀವೆನ್ನ ಕರಸ್ಥಲದಲ್ಲಿ ಮೂರ್ತಿಗೊಂಡ ಕಾರಣ,ನಿಮ್ಮನೆನ್ನ ಸರ್ವಾಂಗದಲ್ಲಿ ಕಂಡೆನಯ್ಯಾ.

      Because of the body I saw saw actions Because of good actions I saw good feelings Because of feelings I saw your true form From the true form I saw the experience of self Attained, O father Because of the experience of self I became rid of sins and impurities Of the body and senses, O father O Kadambalinga Because you of your image On the seat of my palm I see you in every limb O father -Kampada Maritande

      Source: HS Shiva Prakash

    1. ಹಾಲು ಬತ್ತಿದ ಹಸುವಿಂಗೆ ಕರುವ ಬಿಟ್ಟಡೆ ಒದೆಯುವುದಲ್ಲದೆ ಉಣಲೀಸುವುದೆ?ಅರಿವು ನಷ್ಟವಾದವ ಕ್ರೀಯ ಬಲ್ಲನೆ?ಕ್ರೀಯೆಂಬುದೆ ಹಸು, ಅರಿವೆಂಬುದೆ ಹಾಲು, ಬಯಕೆಯೆಂಬುದೆ ಕರು.ಇಂತೀ ತ್ರಿವಿಧವನರಿದಲ್ಲಿ ಸದಾಶಿವಮೂರ್ತಿಲಿಂಗವು ತಾನೆ.

      If you send the calf To a cow bereft of milk She can only give a kick But cannot offer milk Does one bereft of wisdom Know the right action? Right action is the calf Virtue is its milk Yearning is the cow Once the understanding dawns of The distinction between the three The one’s own self Is Sadashivamurthilinga —Maritande the Pot-maker

      Source: HS Shiva Kumar

    1. ಮಕ್ಕಳು ಮರಿಗಳು ಸತ್ತು ನಷ್ಟವಾಗಿ,ಕಷ್ಟ ದುಃಖ ನೆಲೆಗೊಂಡಿತ್ತೆಂದುತನ್ನಿಷ್ಟಲಿಂಗಪೂಜೆಯನಗಲಿಸಿ,ಬಿಟ್ಟಿಯ ಮಾಡಬಹುದೇನಯ್ಯಾ?ಜಂಗಮವು ಬಂದು ತನ್ನ ವ್ರತ ನೇಮಕ್ಕೆ ಬೇಡಿದಡೆನಿಮ್ಮ ಉಪದ್ರವೇನೆಂದು ಭಕ್ತಿಯ ಮಾಡಬಹುದೇನಯ್ಯಾ?ಸಕಲದುಃಖಂಗಳು ತಮ್ಮಿಂದ ತಾವೇ ಬರಲರಿಯವು.ಭಕ್ತಿಯನ್ನು ಮರೆದು, ಮರವೆಯಲ್ಲಿ ಬೆರೆದು,ಭವಭವದಲ್ಲಿ ಬರುವುದು ಅದೇ ದುಃಖವು, ನಿಶ್ಚಯವೆಂದಾತ ನಮ್ಮ ಅಂಬಿಗರಚೌಡಯ್ಯ.

      Because the children and young ones have died Because sorrows and afflictions have come to stay Can one go scotfree Abandoning worship of ishtalinga? When the jangama comes to beg Observing his duty and vow Can you say O friend ‘ Why your irritation?’ And still practice Bhakti? Sorrows and afflictions cannot come On their own Coming into birth and becoming Is itself sorrow This is certain, Says Chowdayya the Ferryman

      -Chowdayya the Ferryman

      Source: HS Shiva Prakash

    1. ‍ಋಣ ತಪ್ಪಿದ ಹೆಂಡಿರಲ್ಲಿಗುಣ ತಪ್ಪಿದ ನಂಟರಲ್ಲಿಜೀವವಿಲ್ಲದ ದೇಹದಲ್ಲಿ ಫಲವೇನೋ?ಆಳ್ದನೊಲ್ಲದಾಳಿನಲ್ಲಿ ಸಿರಿತೊಲಗಿದರಸಿನಲ್ಲಿವರವಿಲ್ಲದ ದೈವದಲ್ಲಿ ಫಲವೇನೋ?ಕಳಿದ ಹೂವಿನಲ್ಲಿ ಕಂಪನುಉಳಿದ ಸೊಳೆಯಲ್ಲಿ ಪೆಂಪನುಕೊಳೆಚೆನೀರಿನಲ್ಲಿ ಗುಣವನರಸುವಿರಿ!ಮರುಳೆ ವರಗುರು ವಿಶ್ವಕ್ಕೆಲ್ಲಗಿರಿಜಾಮನೋವಲ್ಲಭ ಪರಮ ಕಾರುಣಿಕ ನಮ್ಮ ಕೂಡಲಸಂಗಮದೇವ

      Thankless wife Characterless kinsmen Lifeless body

      What use are they?

      You people look for Fragrance in a spoilt flower Charm in a used whore Unity in filthy waters

      Listen, you, mad one! The Harry-charmer of Girija, the great guru The great miracle-master Lord Kudalasangama -He alone is for the whole world

      • Basavanna

      Source: HS Shiva Prakash

    1. ಮನ ಶುದ್ಧವಿಲ್ಲದವಂಗೆ ದ್ರವ್ಯದ ಬಡತನವಲ್ಲದೆ ಚಿತ್ತಶುದ್ಧದಲ್ಲಿ ಕಾಯಕವ ಮಾಡುವಲ್ಲಿ ಸದ್ಭಕ್ತಂಗೆ ಎತ್ತ ನೋಡಿದಡತ್ತ ಲಕ್ಷ್ಮಿ ತಾನಾಗಿಪ್ಪಳು ಮಾರಯ್ಯಪ್ರಿಯ ಅಮಲೇಶ್ವರಲಿಂಗದ ಸೇವೆಯುಳ್ಳನ್ನಕ್ಕರ.

      Only he is poor in wealth Who is not pure of heart When he performs labour With a pure heart For such a true Bhakta Lakshmi becomes wherever he looks So long as he is in service Of Amareshwara Linga —Lakkamma the Rice-gleaner

      Source: HS Shiva Prakash

    1. ಸಮಾಜದ/ಜನಸಮುದಾಯದ ಸಂಪತ್ತನ್ನು ಲೂಟಿಮಾಡಿ ಸಿರಿವಂತರಾಗಿದ್ದರೂ, ತಮ್ಮನ್ನು ತಾವೇ “ ಒಳ್ಳೆಯವರು/ಗುಣವಂತರು/ಸತ್ಯವಂತರು “ ಎಂದು ಹೇಳಿಕೊಂಡು ಮೆರೆಯುತ್ತಿರುವ ವ್ಯಕ್ತಿಗಳ ಲಜ್ಜೆಗೇಡಿತನದ/ನಾಚಿಕೆಯಿಲ್ಲದ ನಡೆನುಡಿಯನ್ನು ಈ ವಚನದಲ್ಲಿ ಹೇಳಲಾಗಿದೆ.

      ( ಕಳ್+ದ್+ಅ=ಕಳ್ದ > ಕದ್ದ; ಕಳ್=ಅಪಹರಿಸು/ಲಪಟಾಯಿಸು/ದೋಚು/ಎಗರಿಸು; ಕದ್ದ=ಅಪಹರಿಸಿದ/ದೋಚಿದ/ಲಪಟಾಯಿಸಿದ; ಕಳವ=ಕಳ್ಳತನ ಮಾಡಿದ ಒಡವೆ ವಸ್ತು/ಸಂಪತ್ತನ್ನು; ಮರೆಸು=ಇತರರ ಕಣ್ಣಿಗೆ ಕಾಣದಂತೆ/ತಿಳಿಯದಂತೆ ಬಚ್ಚಿಡು/ಅಡಗಿಸಿಡು/ಮುಚ್ಚಿಡು; ಮರೆಸಿಕೊಂಡು=ಅಡಗಿಸಿಟ್ಟುಕೊಂಡು/ಬಚ್ಚಿಟ್ಟುಕೊಂಡು/ಮುಚ್ಚಿಟ್ಟುಕೊಂಡು;

      ನಾ=ನಾನು; ಸಜ್ಜನನ್+ಎಂಬ+ಅಂತೆ; ಸಜ್ಜನ=ಒಳ್ಳೆಯ ನಡೆನುಡಿಗಳುಳ್ಳ ವ್ಯಕ್ತಿ; ಸಜ್ಜನನ್=ಒಳ್ಳೆಯವನು/ಗುಣವಂತ; ಎಂಬ=ಎನ್ನುವ/ಎಂದು ಹೇಳುವ; ಅಂತೆ=ಹಾಗೆ/ಆ ರೀತಿ/ ಆ ಬಗೆ;

      ಕದ್ದ ಕಳವ ಮರೆಸಿಕೊಂಡು ನಾ ಸಜ್ಜನನೆಂಬಂತೆ=ಕದ್ದಿರುವ ಒಡವೆ ವಸ್ತುಗಳನ್ನು ಅಡಗಿಸಿಟ್ಟುಕೊಂಡು, ತಾನೊಬ್ಬ ಒಳ್ಳೆಯ ನಡೆನುಡಿಯುಳ್ಳವನು ಎಂದು ಇತರರ ಮುಂದೆ ಹೇಳಿಕೊಳ್ಳುವ ವ್ಯಕ್ತಿಯು ಜನಸಮುದಾಯದ/ಸಮಾಜದ ಕಣ್ಣಿಗೆ ಮಣ್ಣೆರಚುವ ಪ್ರಯತ್ನದಲ್ಲಿ ತೊಡಗಿರುತ್ತಾನೆ;

      ಇರ‍್+ದ್+ಅ=ಇರ‍್ದ > ಇದ್ದ; ಇದ್ದ=ಇರುವ; ಗುಣ=ವ್ಯಕ್ತಿಯ ನಡೆನುಡಿಯಲ್ಲಿನ ರೀತಿನೀತಿ; ನೋಡಿ=ಕಂಡು/ತಿಳಿದು; ಹೊದ್ದು=ಹತ್ತಿರಕ್ಕೆ ಹೋಗುವುದು/ಸಮೀಪಿಸುವುದು; ಹೊದ್ದಿ=ಹತ್ತಿರಕ್ಕೆ ಹೋಗಿ; ಸೋದಿಸಲ್+ಆಗಿ; ಶೋಧ > ಸೋದ; ಶೋಧ=ಹುಡುಕುವುದು/ಕಂಡು ಹಿಡಿಯುವುದು/ತಡಕಾಡುವುದು;

      ಇದ್ದ ಗುಣವ ನೋಡಿ ಹೊದ್ದಿ ಸೋದಿಸಲಾಗಿ=ತನ್ನನ್ನು ತಾನೇ ಸಜ್ಜನನೆಂದು ಹೇಳಿಕೊಳ್ಳುವ ವ್ಯಕ್ತಿಯ ಮಾತಿನ ದಿಟವನ್ನು ತಿಳಿಯಲೆಂದು, ಅವನ ಹತ್ತಿರಕ್ಕೆ ಹೋಗಿ, ಅವನು ತೊಟ್ಟಿದ್ದ ಬಟ್ಟೆಬರೆಗಳ ಒಳಗು ಹೊರಗನ್ನು ತಡಕಾಡಿ ನೋಡಿದಾಗ; ಕದ್ದ ಕಳವು=ಕಳ್ಳತನ ಮಾಡಿದ್ದ ಒಡವೆ ವಸ್ತು; ಕೈ+ಅಲ್ಲಿ+ಇದ್ದ; ಕೈಯಲ್ಲಿದ್ದ=ಅವನಲ್ಲಿಯೇ ಇತ್ತು/ಅವನ ಬಳಿಯಲ್ಲೇ ಇತ್ತು;

      ಮತ್ತೆ=ಮಾಡಿದ್ದ ಕಳ್ಳತನದ ಮಾಲು/ಸರಕು/ವಸ್ತುವಿನ ಸಮೇತ ಸಿಕ್ಕಿಬಿದ್ದ ಮೇಲೆ; ಸಜ್ಜನತನ+ಉಂಟೆ; ಸಜ್ಜನತನ=ಒಳ್ಳೆಯತನ/ಒಳ್ಳೆಯ ವ್ಯಕ್ತಿತ್ತ; ಉಂಟೆ=ಇರುವುದೇ;

      ಕದ್ದ ಕಳವು ಕೈಯಲ್ಲಿದ್ದ ಮೇಲೆ ಸಜ್ಜನತನವುಂಟೆ=ಕದ್ದ ಮಾಲು ಅವನ ಬಳಿಯಲ್ಲೇ ಸಿಕ್ಕಿದ ನಂತರವೂ ಅವನಲ್ಲಿ ಒಳ್ಳೆಯತನವನ್ನು ಕಾಣಲು ಆಗುತ್ತದೆಯೇ/ಅವನನ್ನು ಗುಣವಂತನೆಂದು ತಿಳಿಯಬಹುದೇ. ಅಂದರೆ ಆತ ಕಳ್ಳನೆಂಬುದು ದಿಟ;

      ಇಂತು+ಈ; ಇಂತು=ಈ ರೀತಿಯಲ್ಲಿ/ಈ ಬಗೆಯಲ್ಲಿ; ಸಜ್ಜನ+ಕಳ್ಳರು; ಸಜ್ಜನಗಳ್ಳರು=ಜನರ ಮುಂದೆ ತಮ್ಮನ್ನು ತಾವೇ ಒಳ್ಳೆಯವರೆಂದು ಹೇಳಿಕೊಳ್ಳುತ್ತ, ನಿಜಜೀವನದಲ್ಲಿ ಸಮಾಜದ/ಜನಸಮುದಾಯದ ಸಂಪತ್ತನ್ನು ದೋಚುತ್ತಿರುವ ನೀಚರು/ವಂಚಕರು/ಕೇಡಿಗಳು/ಕ್ರೂರಿಗಳು;

      ಕಂಡು=ನೋಡಿ; ಹೊದ್ದದೆ=ಹತ್ತಿರಕ್ಕೆ ಬಾರದೆ; ಹೋದ=ಹೋದನು; ಕಳಂಕ=ಕುಂದು/ಕೊರತೆ/ತಪ್ಪು; ನಿಃಕಳಂಕ=ಯಾವುದೇ ಬಗೆಯ ತಪ್ಪು/ಕೊರತೆ/ಕುಂದುಗಳು ಇಲ್ಲದವನು; ಮಲ್ಲಿಕಾರ್ಜುನಲಿಂಗ=ಶಿವ/ಈಶ್ವರ; ನಿಃಕಳಂಕ ಮಲ್ಲಿಕಾರ್ಜುನಲಿಂಗ=ಮೋಳಿಗೆ ಮಾರಯ್ಯನ ವಚನಗಳ ಅಂಕಿತನಾಮ;

      ಇಂತೀ ಸಜ್ಜನಗಳ್ಳರ ಕಂಡು ಹೊದ್ದದೆ ಹೋದ ನಿಃಕಳಂಕ ಮಲ್ಲಿಕಾರ್ಜುನಲಿಂಗ=ಜನಸಮುದಾಯದ/ಸಮಾಜದ ಸಂಪತ್ತನ್ನು ದೋಚಿ, ಜನರಿಗೆ ಕೇಡನ್ನು ಬಗೆಯುವ ವ್ಯಕ್ತಿಗಳಿಂದ ದೇವರು ದೂರವಿರುತ್ತಾನೆ. ಏಕೆಂದರೆ ಸಮಾಜಕ್ಕೆ/ಜನಸಮುದಾಯಕ್ಕೆ ಒಳಿತನ್ನು ಮಾಡುವ ನಡೆನುಡಿಯುಳ್ಳವರಿಗೆ ಮಾತ್ರ ದೇವರು ಒಲಿಯುತ್ತಾನೆ ಎಂಬ ನಿಲುವನ್ನು ಶಿವಶರಣಶರಣೆಯರು ಹೊಂದಿದ್ದರು)

      ಮೂಲ: ‍ಹೊನಲು.‌ನೆಟ್ , ‍ಕೊಡು‍ಗೆ: ‍ಸಿ.ಪಿ.ನಾಗರಾಜ

  2. Jan 2019
    1. ಷಣ್ಮುಖಸ್ವಾಮಿ ಆವ ಜಾತಿಯಲ್ಲಿ ಹುಟ್ಟಿದವನಾದಡಾಗಲಿ,ಶ್ರೀಮಹಾದೇವನ ನೆನೆವಾತನದ್ಥಿಕ ನೋಡಾ.ಆತನಿಂದದ್ಥಿಕ ಕಂಗಳು ತುಂಬಿ ನೋಡುವಾತ.ಆತನಿಂದದ್ಥಿಕ ಕೈಮುಟ್ಟಿ ಪೂಜಿಸುವಾತ.ಅದೆಂತೆಂದಡೆ, ಶಿವಧರ್ಮೇ-``ಲಿಂಗಸ್ಯ ದರ್ಶನಂ ಪುಣ್ಯಂ ದರ್ಶನಾತ್ ಸ್ಪರ್ಶನಂ ಶುಭಂ |ಶಿವಲಿಂಗಂ ಮಹಾಪುಣ್ಯಂ ಸರ್ವದೇವ ನಮಸ್ಕøತಂ |ಯಃ ಸ್ಪøಶೇದಪಿ ಪಾಣಿಭ್ಯಾಂ ನ ಸ ಪಾಪೈಃ ಪರಿಲಿಪ್ಯತೇ ||''ಎಂದುದಾಗಿ,ಅಂತಪ್ಪ ಶಿವಲಿಂಗವನು ಹೆರೆಹಿಂಗದೆ ಅಂಗದ ಮೇಲೆನಿರಂತರ ಧರಿಸಿಕೊಂಡಿಪ್ಪಾತನೆ ಎಲ್ಲರಿಂದದ್ಥಿಕ ನೋಡಾಅಖಂಡೇಶ್ವರಾ.
    1. ಆವ ಜಾತಿಯಲ್ಲಿ ಹುಟ್ಟಿದವನಾದಡಾಗಲಿ,ಶ್ರೀಮಹಾದೇವನ ನೆನೆವಾತನದ್ಥಿಕ ನೋಡಾ.ಆತನಿಂದದ್ಥಿಕ ಕಂಗಳು ತುಂಬಿ ನೋಡುವಾತ.ಆತನಿಂದದ್ಥಿಕ ಕೈಮುಟ್ಟಿ ಪೂಜಿಸುವಾತ.ಅದೆಂತೆಂದಡೆ, ಶಿವಧರ್ಮೇ-``ಲಿಂಗಸ್ಯ ದರ್ಶನಂ ಪುಣ್ಯಂ ದರ್ಶನಾತ್ ಸ್ಪರ್ಶನಂ ಶುಭಂ |ಶಿವಲಿಂಗಂ ಮಹಾಪುಣ್ಯಂ ಸರ್ವದೇವ ನಮಸ್ಕøತಂ |ಯಃ ಸ್ಪøಶೇದಪಿ ಪಾಣಿಭ್ಯಾಂ ನ ಸ ಪಾಪೈಃ ಪರಿಲಿಪ್ಯತೇ ||''ಎಂದುದಾಗಿ,ಅಂತಪ್ಪ ಶಿವಲಿಂಗವನು ಹೆರೆಹಿಂಗದೆ ಅಂಗದ ಮೇಲೆನಿರಂತರ ಧರಿಸಿಕೊಂಡಿಪ್ಪಾತನೆ ಎಲ್ಲರಿಂದದ್ಥಿಕ ನೋಡಾಅಖಂಡೇಶ್ವರಾ.
    1. ನಾನಾವೇಳೆಯಲ್ಲಿ ಸಹಸ್ರವೇಳೆಯಲ್ಲಿ ಬರುವದು ದುರ್ಲಾಭ.ಬಂದ ಬಳಿಕ ಶಿವಭಕ್ತಜನ್ಮ ಸಾಧ್ಯವಾಯಿತು.ಶಿವಭಕ್ತ ಜನ್ಮದಲ್ಲಿ ಬಂದುಶಿವಲಿಂಗೈಕ್ಯರ ನಿಂದೆಮಾಡಿ ಕೆಡದಿರು ಕೆಡದಿರು.ಎಲೋ ವೇಷಧಾರಿಗಳಿರಾ, ಶಿವಭಕ್ತ ಬ್ರಹ್ಮವೆಂಬುದು,ಶಿವನ ಸಾಕಾರವೆ ಜಂಗಮದೇವ.ಇಂತೆಂಬ ಉಭಯಭೇದ ನಿಮಗೆ ತಿಳಿಯದು.ವೇಷಾಧಾರಿಗಳು ನೀವು ಕೇಳಿರೋ, ಶುನಕ ಬೆಟ್ಟಕ್ಕೆ ಬೊಗಳಿದಂತೆಭಕ್ತಂಗೆ ಜಾತಿಸೂತಕವುಂಟೆ ಎಂದ ನಿಮ್ಮ ಶರಣಚೆನ್ನಯ್ಯಪ್ರಿಯ ನಿರ್ಮಾಯಪ್ರಭುವೆ.
  3. Dec 2018
    1. ಕಳಬೇಡ, ಕೊಲಬೇಡ, ಹುಸಿಯ ನುಡಿಯಲು ಬೇಡ,ಮುನಿಯಬೇಡ, ಅನ್ಯರಿಗೆ ಅಸಹ್ಯಬಡಬೇಡ,ತನ್ನ ಬಣ್ಣಿಸಬೇಡ, ಇದಿರ ಹಳಿಯಲು ಬೇಡ.ಇದೇ ಅಂತರಂಗಶುದ್ಧಿ, ಇದೇ ಬಹಿರಂಗಶುದ್ಧಿಇದೇ ನಮ್ಮ ಕೂಡಲಸಂಗಮದೇವರನೊಲಿಸುವ ಪರಿ.

      ಸಂಗೀತ: ಪಿ.ಟಿ ವೆಂಕಟೇಶ್ ಕುಮಾರ್ , ತಬಲ: ವಿಜಯ್ ಗಾಟೆ, ಹಾರ್ಮೊನಿಯಂ: ಪಂಚಾಕ್ಷರಯ್ಯ ಹಿರೇಮಠ Audio + Video